ರವಿ ಬೆಳಗೆರೆ (೧೫ ಮಾರ್ಚ್ ೧೯೫೮ - ೧೩ ನವೆಂಬರ್ ೨೦೨೦) ಕನ್ನಡದ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಯಾಗಿದ್ದರು. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ. ರವಿ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. == ಜನನ–ಶಿಕ್ಷಣ–ವೃತ್ತಿಜೀವನ == ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಮಾಡಿದರು. ಅವರು 1995ರಲ್ಲಿ ಜನಪ್ರಿಯ ಹಾಯ್ ಬೆಂಗಳೂರ್! ಟ್ಯಾಬ್ಲಾಯ್ಡ್‌ನ್ನು ಆರಂಭಿಸಿದ್ದರು. == ಕೃತಿಗಳು == === ಕಥಾ ಸಂಕಲನ === ದಾರಿ, 1980 ಪಾ.ವೆಂ. ಹೇಳಿದ ಕಥೆ, 1995 ಒಟ್ಟಾರೆ ಕಥೆಗಳು, 2001 === ಕಾದಂಬರಿ === ಗೋಲಿಬಾರ್, 1983 ಅರ್ತಿ, 1990 ಮಾಂಡೋವಿ, ಸೆಪ್ಟಂಬರ್ 1996 ಮಾಟಗಾತಿ, 1998 ಒಮರ್ಟಾ, ಜನವರಿ 1999 ಸರ್ಪ ಸಂಬಂಧ, ಜೂನ್ 2000 ಹೇಳಿ ಹೋಗು ಕಾರಣ, ಸೆಪ್ಟಂಬರ್ 2003 ನೀ ಹಿಂಗ ನೋಡಬ್ಯಾಡ ನನ್ನ, ಸೆಪ್ಟಂಬರ್ 2003 ಗಾಡ್‌ಫಾದರ್ , ಮಾರ್ಚ್ 2005 ಕಾಮರಾಜ ಮಾರ್ಗ, ನವೆಂಬರ್ 2010 ಹಿಮಾಗ್ನಿ, ೨೦೧೨ === ಅನುವಾದ === ವಿವಾಹ, 1983 ನಕ್ಷತ್ರ ಜಾರಿದಾಗ, 1984 ಹಿಮಾಲಯನ್ ಬ್ಲಂಡರ್, ಸೆಪ್ಟಂಬರ್1999 ಕಂಪನಿ ಆಫ್ ವಿಮೆನ್, ಜನವರಿ 2000 ಟೈಂಪಾಸ್, ಜನವರಿ 2001 ರಾಜ ರಹಸ್ಯ, ನವೆಂಬರ್ 2002 ಹಂತಕಿ ಐ ಲವ್ ಯೂ, ಜನವರಿ 2007 ದಂಗೆಯ ದಿನಗಳು, ಮಾರ್ಚ್ 2008 === ದೇಶ-ಇತಿಹಾಸ-ಯುದ್ಧ === ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999 ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005 ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007 ಇಂದಿರೆಯ ಮಗ ಸಂಜಯ, ಸೆಪ್ಟಂಬರ್ 2002 ಗಾಂಧೀ ಹತ್ಯೆ ಮತ್ತು ಗೋಡ್ಸೆ, ಸೆಪ್ಟಂಬರ್ 2003 ಡಯಾನಾ, ಜನವರಿ 2007 ನೀನಾ ಪಾಕಿಸ್ತಾನ ಅವನೊಬ್ಬನಿದ್ದ ಗೋಡ್ಸೆ ಮೇಜರ್ ಸಂದೀಪ್ ಹತ್ಯೆ ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು ಮುಸ್ಲಿಂ === ಜೀವನ ಕಥನ === ಪ್ಯಾಸಾ, 1991 ಪಾಪದ ಹೂವು ಫೂಲನ್, ಆಗಸ್ಟ್2001 ಸಂಜಯ, 2000 ಚಲಂ (ಅನುವಾದ) ಮಾರ್ಚ್ 2008 === ಕ್ರೈಂ === ==== ಹತ್ಯಾಕಥನ ==== ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991 ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998 ರಂಗವಿಲಾಸ್ ಬಂಗಲೆಯ ಕೊಲೆಗಳು ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007 ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012 ==== ಭೂಗತ ಇತಿಹಾಸ ==== ಪಾಪಿಗಳ ಲೋಕದಲ್ಲಿ ಭಾಗ -1, 1995 ಪಾಪಿಗಳ ಲೋಕದಲ್ಲಿ ಭಾಗ 2, ಸೆಪ್ಟಂಬರ್ 1997 ಭೀಮಾ ತೀರದ ಹಂತಕರು, ಮೇ 2001 ಪಾಪಿಗಳ ಲೋಕದಲ್ಲಿ, 2005 ಡಿ ಕಂಪನಿ, 2008 === ಬದುಕು === ಖಾಸ್‌ಬಾತ್ 96, 1997 ಖಾಸ್‌ಬಾತ್ 97, ಸೆಪ್ಟಂಬರ್ 1997 ಖಾಸ್‌ಬಾತ್ 98, ಸೆಪ್ಟಂಬರ್ 1998 ಖಾಸ್‌ಬಾತ್ 99, ಅಕ್ಟೋಬರ್ 2003 ಖಾಸ್‌ಬಾತ್ 2000, ಅಕ್ಟೋಬರ್ 2003 ಖಾಸ್‌ಬಾತ್ 2001, ಜನವರಿ 2007 ಖಾಸ್‌ಬಾತ್ 2002, ಜನವರಿ 2008 ಖಾಸ್‌ಬಾತ್ 2003 === ಅಂಕಣ ಬರೆಹಗಳ ಸಂಗ್ರಹ === ==== ಜೀವನ ಪಾಠ ==== ಬಾಟಮ್ ಐಟಮ್ ಭಾಗ 1, ಫೆಬ್ರವರಿ2002 ಬಾಟಮ್ ಐಟಮ್ 2, ಅಕ್ಟೋಬರ್2003 ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006 ಬಾಟಂ ಐಟಮ್ 4 ಬಾಟಂ ಐಟಮ್ 5 ==== ಪ್ರೀತಿ ಪತ್ರಗಳು ==== ಲವಲವಿಕೆ -1, ಡಿಸೆಂಬರ್ 1998 ಲವಲವಿಕೆ -2, ಸೆಪ್ಟಂಬರ್ 2004 ಲವಲವಿಕೆ -3 ಲವಲವಿಕೆ -4 === ಕವನ ಸಂಕಲನ === ಅಗ್ನಿಕಾವ್ಯ, 1983 === ಇತರೆ === ಕೇಳಿ, ಜೂನ್ 2001 ಮನಸೇ ಆಡಿಯೋ ಸಿಡಿ ಜನವರಿ 2007 ಫಸ್ಟ್ ಹಾಫ್ ಅಮ್ಮ ಸಿಕ್ಕಿದ್ಲು, ೨೦೧೨ ಇದು ಜೀವ: ಇದುವೇ ಜೀವನ, ೨೦೧೨ ಏನಾಯ್ತು ಮಗಳೇ, ಡಿಸೆಂಬರ್ 2013 ಕಾಫಿ ಡೇ ಸಿದ್ಧಾರ್ಥ, ನವಂಬರ್ 2019 ಪುಲ್ವಾಮ, ಡಿಸೆಂಬರ್ 2019 == ಸಿನೆಮಾ ನಟನೆ ಮತ್ತು ನಿರ್ಮಾಣ == 'ವಾರಸುದಾರ', 'ಗಂಡಹೆಂಡತಿ ಮತ್ತು ಬಾಯ್ ಫ್ರೆಂಡ್' ಎಂಬ ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. 'ಮುಖ್ಯಮಂತ್ರಿ ಐ ಲವ್ ಯೂ' ಎಂಬ ಚಿತ್ರ ನಿರ್ಮಾಣ ಶುರುಮಾಡಿ ಅದನ್ನು ಕಾನೂನು ತೊಡಕಿನಿಂದ ನಿಲ್ಲಿಸಿದರು. == ಪ್ರಶಸ್ತಿಗಳು == == ಮರಣ == ಬೆಳಗೆರೆ ಅವರು ಬೆಂಗಳೂರಿನಲ್ಲಿ, ೧೩ ನವೆಂಬರ್ ೨೦೨೦ರ ಬೆಳಗಿನ ಜಾವ ೨:೩೦ರಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು. ಅವರಿಗೆ ೬೨ ವರ್ಷ ವಯಸ್ಸಾಗಿತ್ತು. == ಬಾಹ್ಯ ಸಂಪರ್ಕ ಕೊಂಡಿಗಳು == ದಟ್ಸ್ ಕನ್ನಡ ತಾಣದಲ್ಲಿ ರವಿ ಬೆಳಗೆರೆಯ ಸೂರ್ಯ ಶಿಕಾರಿ ಅಂಕಣ 2005-12-25 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==